ಗುರುವಾರ, ಮಾರ್ಚ್ 26, 2009

ಹೀಗೊಂದು ಕಥೆ..........

ಇದು ಮನಸೇ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಕಥೆ.... ರವೀ ಅಜ್ಜಿಪುರ ಬರೆದದ್ದು, ಅದನ್ನು ಯಥವಥ್ಥಾಗಿ ಇಡುತಿದ್ದೇನೆ ಒಪ್ಪಿಸಿಕೊಳ್ಳಿ...

ನಾನು ಒಮ್ಮೊಮ್ಮೆ ಅಂಥದೊಂದು ಆಸೆಗೆ ಬೀಳುವುದಿದೆ. ಗೋಬಿ ತಿನ್ನಬೇಕು, ಜಾಮೂನ್ ತಿನ್ನಬೇಕು, ನಾರ್ತ್ ಇಂಡಿಯನ್ ರೋಟಿ ಕರ್ರಿ ತಿನ್ನಬೇಕು ಅಂತೆಲ್ಲ ಬಯಸಿಕೊಳ್ಳುತೇನೆ. ಇಂಥ ಬಯಕೆ, ಬಸುರಿಗೆ ಬಂದಂತೆ ಬಂದಾಗಲೆಲ್ಲ ನನ್ನ ಗೆಳೆಯರು ಕರೆದುಕೊಂಡು ಹೋಗಿ ತಿನ್ನಿಸಿ ಕಣ್ಣ್ ತುಂಬಿಕೊಳುತಾರೆ. ಅವರ ಪ್ರೀತಿ ದೊಡ್ಡದು. ನನ್ನ ಹೊಟ್ಟೆಯು ದೊಡ್ಡದೇ!
ಅವತ್ತು ಹಾಗೆ ಆಯ್ತು. ದಾರಿಯಲ್ಲಿ ಹೋಗುತಿದ್ದವನಿಗೆ ಗೋಬಿ ತಿನ್ನಬೇಕು ಅನ್ನುವ ಬಯಕೆ ಅದೆಲ್ಲಿತ್ತೋ, ಗೆಳೆಯನ ಕಾರ್ ನಿಲ್ಲಿಸಿ ಗೊಬಿಗೆ ಆರ್ಡರ್ ಮಾಡಿ ಕುಳಿತೆವು. ಆಗ ಬಂದವರೇ ಮೂರು ಜನ.
ಅದರಲ್ಲಿ ಇಬ್ಬರು ಹುಡುಗರು. ಒಬ್ಬಳು ಹುಡುಗಿ. ಕೃಷ್ಣ ಸುಂದರಿ ಅಂತಾರಲ್ಲ ಅದಕ್ಕಿಂತ ಚನ್ನಗಿದ್ದಳು ಆಕೆ.
'ನಿನಗೇನು ಬೇಕು ತಗೋ' ಅಂದ ಒಬ್ಬ.
ಇವಳು ಕತ್ತು ಕೊಂಕಿಸಿ, 'ನನಗೊಂದು ಇಡ್ಲಿ' ಅಂದು ಬಿಟ್ಲು. ದೇವರೇ? ಇದೆಂತ ಆಸೆ ಮಾರಾಯ? ಅಲ್ಲಿ ಗೋಬಿ ಇತ್ತು, ನೂಡಲ್ಸ್ ಇತ್ತು, ಪರೋಟ ಇತ್ತು. ಇನ್ನು ಏನೇನೊ ಇತ್ತು. ಅವೆಲ್ಲ ಬಿಟ್ಟು ಜುಜುಬಿ ಒಂದು ಸಿಂಗಲ್ ಇಡ್ಲಿಗೆ ಆಸೆಪಡೋ ಮನಸಾ ಇವಳದು!
ಆದರೆ ಯಾರಿಗೆ ಗೊತ್ತು, ಯಾರ ಮನಸ್ಸು ಯಾವುದಕ್ಕಾಗಿ ತಹತಹಿಸುತ್ತದೋ! ನಮಗೆ ಗೋಬಿ ಬಂತು. ಅವಳಿಗೆ ಇಡ್ಲಿಯೂ ಬಂತು.
ಒಬ್ಬ ತನ್ನ ಕಯಿಯಲ್ಲ್ಲಿ ಸಿಂಗಲ್ ಇಡ್ಲಿ ತಟ್ಟೆ ಹಿಡಕೊಂಡು ಕೂತು, ಅವಳು ತಿನ್ನುವುದನ್ನೇ ನೋಡುತಿದ್ದ. ಇನ್ನೊಬ್ಬ... ಹೀಗೆ ತಿನ್ನು, ಹಾಗೆ ತಿನ್ನು ಅಂತನ್ನುತ್ತಲೇ... ಮದ್ಯೆ ಮದ್ಯೆ ಚೂರು ಚೂರೇ ಮುರಿದು ಅವಳ ಬಾಯಿಗಿಡುತ್ತಿದ್ದ.
ನನಗೆ ಅಚ್ಚರಿಯಾಯಿತು.
ಇದೇನು ಪ್ರೀತಿಯಾ? ಮಮತೆಯಾ? ಏನಿದು?
ಅವರಿಬ್ಬರು ಅವಳು ತಿನ್ನುವುದನ್ನು ಕಣ್ಣ್ ತುಂಬಿಕೊಂಡರೆ ವಿನಃ
ಒಂದು ತುತ್ತನ್ನೂ ಮುಟ್ಟಿದವರಲ್ಲ.
ಅವಳು ನೀನು ತಗೋ ಅಂತ ಯಾರಿಗೂ ಹೇಳಲಿಲ್ಲ.
ನಾನು ಗೊಬಿಯನ್ನು ಕಯಿಯಲ್ಲಿ ಹಿಡಿದುಕೊಂಡಿದ್ದೇನೆ ವಿನಃ ತಿನ್ನುವ ಮನಸ್ಸಾಗಲಿಲ್ಲ. ಮನಸ್ಸು ಏನನ್ನೋ ಹಚ್ಚಿಕೊಂಡತಿತ್ತು. ಒಂದು ಇಡ್ಲಿಯನ್ನೇ ಅಸ್ಟೊಂದು ಎಂಜಾಯ್ ಮಾಡಿಕೊಂಡು ತಿನ್ನುತ್ತಿದ್ದಾಳಲ್ಲ! ಅವಳ ಅಲ್ಪ ತೃಪ್ತಿಗೆ ನನ್ನ ನಮೋನಮಃ.
ಮದ್ಯೆ ಒಬ್ಬ ಹೋಗಿ ಚಟ್ನಿ ಹಾಕಿಸಿಕೊಂಡು ಬಂದು ಕುಳಿತು ಅವಳನ್ನೇ ದಿಟ್ಟಿಸತೊಡಗಿದ. ಆದರೆ ಏನಾಯಿತೋ ಏನೋ ಒಬ್ಬ ಮಾತ್ರ ಸ್ವಲ್ಪ ಡಲ್ ಆಗಿದ್ದಂತೆ ಕಂಡು ಬಂತು. ಅದೇ ಸಮಯಕ್ಕೆ ಅವನಿಗೊಂದು ಕರೆ ಬಂತು. ಕಿವಿಗೆ ಮೊಬೈಲ್ ಕಡೆ ಎದ್ದು ಹೋದ.
ಅವನು ಹೋದದ್ದೇ ತಡ ಇವಳು ಅದಕ್ಕೊಸ್ಕರಾನೆ ಕಾದಿದ್ದವಳಂತೆ ಫಟ್ ಅಂತ ಚೂರು ಇಡ್ಲಿ ಮುರಿದು ಎದುರಿಗಿದ್ದವನ ಬಾಯಿಗಿಟ್ಟಳು. ಅವನ ಮುಖದಲ್ಲಿನ ಮಂದಹಾಸ ನೋಡಬೇಕಿತ್ತು ! ನೂರು ಟ್ಯೂಬ್ ಲೈಟ್ ಒಮ್ಮೆಲೇ ಜಗ್ಗಂತ ಹತ್ತಿ ಆರಿದಂಗಿತ್ತು. ಆದರೆ ಅವನಿಗಿಲ್ಲದ ಪ್ರೀತಿ ಇವನ ಕಡೆಗಿದೆಯ? ಅನ್ನುವುದೊಂದು ಅನುಮಾನ ಶುರುವಾಯಿತು.
ಆಮೇಲೆ ಮೂವರೂ ಕೈ ತೊಳೆದುಕೊಂಡರು. ಆಗ ಒಬ್ಬ ಹೇಳಿದ. 'ಎಂಥ ಸ್ವಾರ್ಥಿಯೇ ನೀನು, ನಮಗೂ ಒಂಚೂರು ತಿನ್ನು ಅನ್ನಲಿಲ್ಲವಲ್ಲ!'
ಇವಳ ಮುಖ ಜರ್ರಂತ ಇಳಿದು ಹೋಯಿತು. ಇವನಿಗೆ ತಿನ್ನಿಸಿದೆ ಅಂದ್ರೆ ಅವನಿಗೆ ಮೋಸ ಮಾಡಿದ ಹಾಗಾಗುತ್ತದೆ. ಅಲ್ಲದೆ ಅವನೆಡೆಗಿರುವ ಪ್ರೀತಿಯು ಕಮರಿ ಹೋದೀತು! ಹುಡುಗಿ ಗೊಂದಲಕ್ಕೆ ಬಿದ್ದಿದ್ದಾಳೆ ಅನಿಸಿತು. ಆದರೆ ಮ್ಯಾನೇಜ್ ಮಾಡಿದಳು. ತಕ್ಷಣ ನಂಗೆ ಇನ್ನೊಂದು ಇಡ್ಲಿ ಬೇಕು ಅಂದಳು. 'ಈಗ ತಿಂದಲ್ಲೇ?' ಅಂತ ಮಾತಿಗೂ ಅನ್ನಲಿಲ್ಲ. ಒಬ್ಬ ಓಡಿ ಹೋಗಿ ಸಿಂಗಲ್ ಇಡ್ಲಿ ತಂದು ಅವಳ ಕೈಗಿತ್ತ.
ಇವಳು ಇಬ್ಬರನ್ನು ಎದುರಿಗೆ ಕೂರಿಸಿಕೊಂಡು ಚೂರು ಚೂರೇ ತಿನ್ನಿಸತೊದಗಿದಳು. ನನಗೆ ಯಾಕೋ ಕಣ್ಣಲ್ಲಿ ಹನಿ ನೀರು ಬಂತು.
ಇದೆಂಥ ಪ್ರೀತಿ ಮಾರಾಯ? ಪ್ರೀತಿಯ ವಾಂಚೆಗಳು ಹೀಗೂ ಇರುತ್ತವಾ? ಹಚ್ಚಿ ಕೊಳ್ಳುವುದಂದರೆ ಹೀಗೂ ಇದೆಯಾ? ಅವರ ಪ್ರೀತಿಗೆ ಹ್ಯಾಟ್ಸ್ ಆಪ್! ಯಾಕೋ ಮನಸ್ಸು ಅಲ್ಲಿಂದ ಕದಲತೊಡಗಿತು.
ಎರಡನೆ ಬಾರಿಗೆ ಬಾಯಿಗಿರಿಸಿಕೊಂಡ ಹುಡುಗನ ಕಣ್ಣಲ್ಲಿ ಮಾತ್ರ ಏನೋ ಸಂತೃಪ್ತಿ ಮತ್ತು ಸಂಮ್ರಮ.
ಅದು ಅವಳ ಕಣ್ಣಲ್ಲೂ ಇತ್ತು.